ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ: ನಟ ಚೇತನ್
ಕುಷ್ಟಗಿ: ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಮತ್ತು ಜಾತಿ ಹಾಗೂ ಧರ್ಮಾಧಾರಿತ ರಾಜಕೀಯ ವ್ಯವಸ್ಥೆಯನ್ನು ಬುಡಮಟ್ಟದಿಂದ ತೊಡೆದು ಹಾಕಬೇಕಾದರೆ, ರಾಜ್ಯದ ಪ್ರತಿಯೊಬ್ಬ ನಾಗರಿಕರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಚಲನಚಿತ್ರ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಕರೆ ನೀಡಿದ್ದಾರೆ. ನಗರದಲ್ಲಿ ಹೈದರಾಬಾದ್-ಕರ್ನಾಟಕ ಯುವಶಕ್ತಿ (ರಿ) ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು. ಪ್ರಗತಿಪರರೆಲ್ಲರೂ ಒಂದೆಡೆ ಸೇರಿ ನಿರಂತರ ಹೋರಾಟ, ಜನಸೇವೆ ಮತ್ತು ದೇಶಪ್ರೇಮವನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು. ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಈ ವಿಶೇಷ ಮೆರವಣಿಗೆಯು ಬಸವೇಶ್ವರ ವೃತ್ತದ ಮಾರ್ಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯವರೆಗೆ ಸಾಗಿತು. ನಟ ಚೇತನ್ ಅಹಿಂಸಾ ತೆರೆದ ವಾಹನದ ಮೂಲಕ ನಗರದ ಮುಖ್ಯ ರಸ್ತೆಯಲ್ಲಿ ಸಾಗುತ್ತಾ, ಸಾಲುಗಟ್ಟಿ ನಿಂತಿದ್ದ ಜನರತ್ತ ಕೈ ಮುಗಿದು ಗೌರವ ಸಲ್ಲಿಸುತ್ತಾ ಮುನ್ನಡೆದರು. ಈ ಸಂದರ್ಭದಲ್ಲಿ ಚೇತನ್ ಅವರ ಅಭಿಮಾನಿಗಳು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಹೈದರಾಬಾದ್-ಕರ್ನಾಟಕ
ಯುವಶಕ್ತಿ (ರಿ) ಕುಷ್ಟಗಿ ಸಂಘಟನೆಯ ಪ್ರಧಾನ ಸಂಚಾಲಕ ಬಸವರಾಜ ಗಾಣಿಗೇರ, ಕಿರಣ ಜ್ಯೋತಿ, ಮರಿಯಪ್ಪ ಗುಮಗೇರಾ, ಪರಶುರಾಮ ಬೋದೂರು, ಹುಸೇನ್ ಬಳೂಟಗಿ, ಲೋಕೇಶ ನೆರೆಬೆಂಚಿ, ಮುತ್ತುರಾಜ ಕಟ್ಟಿಮನಿ, ದುರಗೇಶ ದೇವರಮನಿ, ಹುಸೇನಪ್ಪ ಚಲವಾದಿ, ಶಂಕ್ರಪ್ಪ ಜುಮಲಾಪೂರು, ಸಂಜೀವ ಚಲುವಾದಿ, ದುರಗೇಶ ನವಲಹಳ್ಳಿ ಸೇರಿದಂತೆ ಅನೇಕ
ಪ್ರಗತಿಪರ ಚಿಂತಕರು ಮತ್ತು ಚೇತನ್ ಅವರ ಅಭಿಮಾನಿಗಳು ಭಾಗವಹಿಸಿದ್ದರು.
☑
ಜಾತಿ ಮತ್ತು ಧರ್ಮಾಧಾರಿತ ರಾಜಕೀಯ
ವ್ಯವಸ್ಥೆಯನ್ನು ಕಿತ್ತೊಗೆದು ಸಮ ಸಮಾಜ ನಿರ್ಮಿಸಬೇಕೆಂಬುದು ಚೇತನ್ ಅವರ ಆಶಯ. ಕಲ್ಯಾಣ
ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಿನ ಹೋರಾಟವೇ ಮದ್ದು. ಕುಷ್ಟಗಿ
ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯು ಜನಸಾಮಾನ್ಯರ ಗಮನ ಸೆಳೆಯಿತು. ದೇಶಪ್ರೇಮ ಮತ್ತು
ಜನಸೇವೆಯ ಮೂಲಕ ದೇಶವನ್ನು ಮುನ್ನಡೆಸಬೇಕೆಂಬ ನಿರ್ಧಾರವನ್ನು ಕಾರ್ಯಕ್ರಮದಲ್ಲಿ
ವ್ಯಕ್ತಪಡಿಸಲಾಯಿತು.
ವರದಿ:
- ಕಿರಣ್ ದಾನಿ, ಸಂಪಾದಕರು, ರಣಗಲ್ ನ್ಯೂಜ್. © ಸರ್ವ ಹಕ್ಕು ಕಾಯ್ದಿರಿಸಲಾಗಿದೆ.
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
