ರಣಗಲ್ ನ್ಯೂಸ್ (Ranagal
Newz) - ಬಗ್ಗೆ
ರಣಗಲ್
ನ್ಯೂಸ್ ಡಿಜಿಟಲ್ ಮಾಧ್ಯಮ ರಂಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಸುದ್ದಿ
ಪೋರ್ಟಲ್ ಆಗಿದೆ. ಸಮಾಜದ ಸಾರ್ವಜನಿಕ ಹಿತಾಸಕ್ತಿ, ಜನಸಾಮಾನ್ಯರ ಧ್ವನಿ
ಹಾಗೂ ನೈಜ ಘಟನೆಗಳನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ನಿಷ್ಪಕ್ಷಪಾತವಾಗಿ ಓದುಗರಿಗೆ ತಲುಪಿಸುವ
ಧೇಯವನ್ನು ಹೊಂದಿದ್ದೇವೆ.
ನಮ್ಮ ಮುಖ್ಯ ಉದ್ದೇಶ ಮತ್ತು
ಜವಾಬ್ದಾರಿಗಳು: ಸಮಾಜದಲ್ಲಿ ನಡೆಯುವ ರಾಜಕೀಯ, ಸಾಮಾಜಿಕ, ಹಾಗೂ ಸ್ಥಳೀಯ ವಿದ್ಯಮಾನಗಳನ್ನು ಆಳವಾಗಿ ಅಧ್ಯಯನ
ಮಾಡಿ, ಸತ್ಯಾಂಶಗಳನ್ನು ಜನರಿಗೆ ತಲುಪಿಸುವುದು. ಪ್ರಜಾಪ್ರಭುತ್ವದ
ಆಶಯದಂತೆ ಪ್ರತಿಯೊಬ್ಬ ನಾಗರಿಕನಿಗೂ ಮಾಹಿತಿ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖ
ಆದ್ಯತೆಗಳಲ್ಲೊಂದಾಗಿದೆ. ಪ್ರಾದೇಶಿಕ ಮತ್ತು ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ
ಗಮನಕ್ಕೆ ತರಲು ವೇದಿಕೆಯನ್ನು ನಿರಂತರವಾಗಿ ಬಳಸಿಕೊಳ್ಳಲಾಗುತ್ತದೆ. ಮಾಧ್ಯಮ ರಂಗದ ನೈತಿಕ
ಮೌಲ್ಯಗಳನ್ನು ಎತ್ತಿಹಿಡಿಯುತ್ತಾ, ಸಾರ್ವಜನಿಕರಿಗೆ ನಿರಂತರವಾಗಿ
ಜವಾಬ್ದಾರಿಯುತ ಪತ್ರಿಕೋದ್ಯಮದ ಮೂಲಕ ಸೇವೆ ಸಲ್ಲಿಸಲು ರಣಗಲ್ ನ್ಯೂಸ್ ಬದ್ಧವಾಗಿದೆ.