ಗುರುನಮನ
ವಿನಯದ ಮಾತು ಬೆಳೆಸಿದ ಗುರು
ನಿಶ್ಶಬ್ದದಲ್ಲೂ ದಾರಿ ತೋರಿದವರು;
ನೇರ ನೋಟದ ಜೀವನಪಾಠ
ಸರಳತೆಯ ಬೆಳಕು ಹಚ್ಚಿದವರು ॥
ಕ್ಲಿಷ್ಟತೆಯ ಹಾದಿ ತೊರೆದು
ಸಾಧುತನದ ದಾರಿ ತೋರಿಸಿ;
ಯಾರಿಗೂ ಕೇಡಿಲ್ಲದ ನಡೆಗೆ
ಮನದ ಬಲವ ತುಂಬಿದವರು ॥
“ಅಗತ್ಯವಿಲ್ಲದ ಕಡೆ ಸುಳ್ಯಾಕೆ?”
ಎಂದು ಪ್ರಶ್ನೆ ಕಲಿಸಿದವರು;
“ನಾನಿಲ್ಲದ ಜಗತ್ತಿಗೆ ಯಾವ ಬೆಲೆ?”
ಎಂಬ ಚಿಂತನೆ ಬಿತ್ತಿದವರು ॥
ಅವಸರವಿಲ್ಲದ ಮಾತಿನೊಳಗೆ
ಸತ್ಯದ ತೂಕವ ಹೊತ್ತವರು;
ಸಾಧ್ಯವಾದಷ್ಟು ಸಹಾಯಹಸ್ತ
ಮೌನವಾಗಿ ನೀಡಿದವರು ॥
ಇಂದು ನಾ ನಡೆಯುವ ದಾರಿಯಲ್ಲಿ
ಅವರ ನೆರಳೇ ಜೊತೆಗಿದೆ;
ವಿನಯದಿಂದ ಶಿರಬಾಗಿ ಗುರುವಿಗೆ
ನಮನ—ಅದರಲ್ಲೆ ಬದುಕಿದೆ ॥
ಬರಹ:
✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
