ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯೋತ್ಸವ ಸಮಾಜದಲ್ಲಿ ಒಗ್ಗಟ್ಟು ಮತ್ತು ಮಾನವೀಯ ಮೌಲ್ಯಗಳ ಬೆಳೆಸುವಿಕೆಗೆ ಮಹನೀಯರ ಜಯಂತಿಗಳು ದಾರಿದೀಪ: ಶಾಸಕ ದೊಡ್ಡನಗೌಡ ಪಾಟೀಲ 

ಕುಷ್ಟಗಿ: ಗುಮಗೇರ ಗ್ರಾಮದ ಶ್ರೀ ಓಂಕಾರೇಶ್ವರ ಮಾಂಗಲ್ಯ ಮಂದಿರದಲ್ಲಿ ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ಶ್ರೀ ವೇಮನರ ಜಯಂತ್ಯೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಣ್ಯರು, ಮಲ್ಲಮ್ಮನವರ ತ್ಯಾಗ, ಭಕ್ತಿ ಹಾಗೂ ಸೇವಾ ಮನೋಭಾವವನ್ನು ಸ್ಮರಿಸಿದರು.

  • ಸಮಾಜದ ಸಂಘಟನೆಗೆ ಕರೆ: ರಡ್ಡಿ ಸಮಾಜವು ಪ್ರಬಲವಾಗಿದ್ದರೂ ಸರಿಯಾದ ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು, ಸಮಾಜದ ಮೂಲ ಕಸುಬು ಒಕ್ಕಲುತನವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಶಾಂತವೀರ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶ್ರೀಗಳು ಕರೆ ನೀಡಿದರು.

·         ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ಅವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಮಾಜದಲ್ಲಿ ಒಗ್ಗಟ್ಟು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹನೀಯರ ಜಯಂತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಹೇಮರಡ್ಡಿ ಮಲ್ಲಮ್ಮ ಅವರ ಜೀವನ ಮಾದರಿಯಾಗಿದೆ ಎಂದು ಹೇಳಿದರು.

·         ಕೊಪ್ಪಳ ವಿವಿ ಕುಲಪತಿ ಡಾ.ಎಸ್‌ ವಿ ಡಾಣಿ ಉಪನ್ಯಾಸ ನೀಡಿ ಹೇಮರಡ್ಡಿ ಮಲ್ಲಮ್ಮ ಅವರ ಜೀವನ, ತತ್ವಗಳು ಹಾಗೂ ಸಮಾಜಕ್ಕೆ ನೀಡಿದ ಸಂದೇಶ, ತ್ಯಾಗ, ಭಕ್ತಿ, ಸೇವಾ ಮನೋಭಾವ ಹಾಗೂ ಧಾರ್ಮಿಕ ಮೌಲ್ಯಗಳನ್ನು ಸ್ಮರಿಸಿದರು. ಯುವಪೀಳಿಗೆ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

·       ಸ್ವಾರ್ಥದ ಬದುಕನ್ನು ಬಿಟ್ಟು ನಿಸ್ವಾರ್ಥ ಬದುಕನ್ನು ನಡೆಸಬೇಕು ಕೆಳಗಿದ್ದವರನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕು ಹೇಮರೆಡ್ಡಿ ಮಲ್ಲಮ್ಮ ತೋರಿದ ತಾಳ್ಮೆ ಮತ್ತು ಭಕ್ತಿಯ ಹಾದಿಯಲ್ಲಿ ಸಾಗಬೇಕು. ಸಮಾಜದ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಗುಣ ಮಲ್ಲಮ್ಮನವರಿಂದ ಕಲಿಯಬೇಕಿದೆ ಎಂದು ದೊಡ್ಡಬಸವನಗೌಡ ಬಯ್ಯಾಪೂರು ಹೇಳಿದರು.

·           ಸತಿ-ಪತಿಗಳ ಬಾಂಧವ್ಯಕ್ಕೆ ಮಲ್ಲಮ್ಮನವರು ಜಗತ್ತಿಗೆ ಆದರ್ಶವಾಗಿದ್ದಾರೆ. ಇಂದಿನ ಹೆಣ್ಣುಮಕ್ಕಳು ಅವರ ತಾಳ್ಮೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ಅಭಿಪ್ರಾಯಪಟ್ಟರು.

·         ಅಭಿನವ ಕರಿಬಸವ ಶ್ರೀಗಳು ಆಶೀರ್ವಚನ ನೀಡಿದರು. ರಡ್ಡಿ ಸಮಾಜದ ರಾಜ್ಯಾದ್ಯಕ್ಷ ಶೇಖರಗೌಡ ಮಾಲಿಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು, ರಡ್ಡಿ ಸಮಾಜ ತಾಲೂಕಾಧ್ಯಕ್ಷ ದೊಡ್ಡನಗೌಡ ವಿ ಪಾಟೀಲ, ಜಿಲ್ಲಾ ಅಧ್ಯಕ್ಷ ಜಗದೇಶಪ್ಪ ಸಾಹುಕಾರ ಸಿಂಗನಾಳ, ಪ್ರಭು ಹೆಬ್ಬಾಳ, ಆರ್.ಪಿ.ರಡ್ಡಿ, ಸಂಗಪ್ಪ ಹೊಕ್ಕಳದ್, ಪುರುಷೋತ್ತಮ ರಡ್ಡಿ, ರುದ್ರಗೌಡ ಪಾಟೀಲ, ಶೇಖರಗೌಡ ಎಮ್ ಪಾಟೀಲ, ಶಶಿಧರ ಸೋಮನಗೌಡ ಗೌಡರ, ಸುರೇಶ ಕುಂಟನಗೌಡ, ರವಿಕುಮಾರ ಜಂಬಲದಿನ್ನಿ, ಟಿ ಬಸವರಾಜ, ಶರಣಪ್ಪ ರ್ಯಾವಣಕಿ ವೆಂಕಟೇಶ ರಡ್ಡಿ ಸೇರಿದಂತೆ ರಡ್ಡಿ ಸಮಾಜದ ಹಿರಿಯರು ಮಹಿಳೆಯರು ಯುವಕ ಮಿತ್ರರು ಇದ್ದರು. ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

  • ಅದ್ದೂರಿ ಮೆರವಣಿಗೆ: ಜಯಂತಿಯ ಅಂಗವಾಗಿ ಮಲ್ಲಮ್ಮ ಮತ್ತು ವೇಮನರ ಭಾವಚಿತ್ರಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಯಿತು. ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಸಮಾಜಮುಖಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಬರಹ:

- ಕಿರಣ್  ದಾನಿ   (ರಣಗಲ್ ನ್ಯೂಸ್ ಸಂಸ್ಥಾಪಕರು)

All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026

 


 

Post a Comment

Previous Post Next Post