ಕುಷ್ಟಗಿ ಆಸ್ಪತ್ರೆಗೆ ಬೀಗ: ಮುಖ್ಯಮಂತ್ರಿಗಳ ಉದ್ಘಾಟನೆಯೂ ವ್ಯರ್ಥ:

ಕುಷ್ಟಗಿ ಆಸ್ಪತ್ರೆಗೆ ಬೀಗ: ಕೋಟ್ಯಂತರ ರೂಪಾಯಿ ನೀರಿನಲ್ಲಿ ಹುಂಚಣ್ಣು ತೊಳೆದ ಹಾಗಿದೆ! ಬಡವರ ಗೋಳು ಕೇಳೋರಿಲ್ಲವೇ?

ಕುಷ್ಟಗಿ ಆಸ್ಪತ್ರೆಗೆ ಬೀಗ: ಕೋಟ್ಯಂತರ ರೂಪಾಯಿ ನೀರಿನಲ್ಲಿ ಹುಂಚಣ್ಣು ತೊಳೆದ ಹಾಗಿದೆ! ಬಡವರ ಗೋಳು ಕೇಳೋರಿಲ್ಲವೇ?

ಕುಷ್ಟಗಿ: ರೋಗಿಗಳಿಗೆ ವರದಾನವಾಗಬೇಕಿದ್ದ ಕೋಟ್ಯಂತರ ರೂಪಾಯಿ ವೆಚ್ಚದ ತಾಯಿ ಮತ್ತು ನವಜಾತ ಶಿಶು ಆಸ್ಪತ್ರೆ, ಅಧಿಕೃತವಾಗಿ ಲೋಕಾರ್ಪಣೆಯಾದರೂ ಇನ್ನೂ ಕಾರ್ಯಾರಂಭ ಮಾಡದೆ ಧೂಳು ತಿನ್ನುತ್ತಿದೆ. ಸಾರ್ವಜನಿಕರ ತೆರಿಗೆಯ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಿದ ಈ ಬೃಹತ್ ಕಟ್ಟಡ, ಬಡವರಿಗೆ ಅನುಕೂಲವಾಗಬಾರದು ಎಂದು ಸ್ವಹಿತಾಸಕ್ತಿಯ "ಕಾಣದ ಕೈಗಳು" ತಡೆಹಿಡಿದಿವೆ ಎಂದು ಸ್ಥಳೀಯರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಮಂತ್ರಿಗಳ ಉದ್ಘಾಟನೆಯೂ ವ್ಯರ್ಥ: ಸುಮಾರು ಆರು ತಿಂಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಗಳೇ ಕೊಪ್ಪಳಕ್ಕೆ ಆಗಮಿಸಿ, ಈ ಆಸ್ಪತ್ರೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದ್ದರು. ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮದ ನಂತರವೂ ಆಸ್ಪತ್ರೆ ಸಂಪೂರ್ಣವಾಗಿ ಬಾಗಿಲು ತೆರೆಯದಿರುವುದು ಆಡಳಿತ ವೈಫಲಿಗೆ ಹಿಡಿದ ಕನ್ನಡಿಯಾಗಿದೆ.

ಒಂದು ದಿನದ ನಾಟಕ: ರಣಗಲ್ ನ್ಯೂಸ್ ಮತ್ತು ಸಾರ್ವಜನಿಕರ ತೀವ್ರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ, ಕೇವಲ ಒಂದೇ ದಿನ ಆಸ್ಪತ್ರೆಯನ್ನು ತೆರೆದು ಕೈತೊಳೆದುಕೊಂಡಿದೆ. ನಂತರದ ದಿನಗಳಲ್ಲಿ ಮತ್ತೆ ಎಂದಿನಂತೆ ಆಸ್ಪತ್ರೆಗೆ ಬೀಗ ಜಡಿಯಲಾಗಿದ್ದು, ಬಡ ರೋಗಿಗಳು ಪರದಾಡುವಂತಾಗಿದೆ.

ಹೊಸ ಟೆಂಡರ್ ಹುನ್ನಾರವೇ? ಕಟ್ಟಡವು ಸಂಪೂರ್ಣವಾಗಿ ಹಾಳಾಗಲಿ, ಉಪಕರಣಗಳು ತುಕ್ಕು ಹಿಡಿಯಲಿ, ನಂತರ ಮತ್ತೆ ಕೋಟಿಗಟ್ಟಲೆ ಹಣಕ್ಕೆ ಹೊಸ ಟೆಂಡರ್ ಕರೆದು ಅದರಲ್ಲಿ ಕಮಿಷನ್ ಹೊಡೆಯುವ ಹುನ್ನಾರ ಇದರ ಹಿಂದೆ ಇದೆಯೇ ಎಂಬ ಅನುಮಾನವನ್ನು ಸಾರ್ವಜನಿಕರ ವ್ಯಕ್ತಪಡಿಸಿದ್ದೀರಿ.

ಬಡವರ ಬದುಕು ಬಲಿಯಾಗುತ್ತಿದೆ: ಕೋಟ್ಯಂತರ ರೂಪಾಯಿ ವೆಚ್ಚದ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸದಿದ್ದರೆ, ಬಡ ಬಗ್ಗರಿಗೆ ಸುಸಜ್ಜಿತ ವ್ಯವಸ್ಥೆ ಸಿಗುವುದಿಲ್ಲ. ಈ ಬಗ್ಗೆ ಶಾಸಕರು, ಸಂಸದರು, ಡಿಎಚ್‌ಒ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಬಡವರ ಪಾಲಿಗೆ ವರದಾನವಾಗಬೇಕಿದ್ದ ಆಸ್ಪತ್ರೆ, ಇಂದು ಧೂಳು ತಿನ್ನುತ್ತಿದೆ! ಕೋಟ್ಯಂತರ ರೂಪಾಯಿಗಳ ಬೃಹತ್ ಕಟ್ಟಡ, ಅತ್ಯಾಧುನಿಕ ಉಪಕರಣಗಳು ಇದ್ದರೂ ರೋಗಿಗಳಿಗೆ ಬಾಗಿಲು ತೆರೆಯುತ್ತಿಲ್ಲವೇಕೆ? ರಾಜ್ಯದ ಮುಖ್ಯಮಂತ್ರಿಗಳೇ ಬಂದು ಲೋಕಾರ್ಪಣೆ ಮಾಡಿದರೂ, ಆರು ತಿಂಗಳಾದರೂ ಈ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಂಡಿಲ್ಲ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದಾಯಿತು, ಪತ್ರ ವ್ಯವಹಾರ ನಡೆಸಿದ್ದಾಯಿತು, ಆದರೆ ಫಲವೇನು? ಜನರ ತೆರಿಗೆಯ ಹಣದಲ್ಲಿ ನಿರ್ಮಾಣವಾದ ಈ ಸುಸಜ್ಜಿತ ಕಟ್ಟಡ, ಸಾರ್ವಜನಿಕರ ಬಳಕೆಗೆ ಮುಕ್ತವಾಗಬಾರದು ಎಂದು ಬಯಸುವ ಆ "ಕಾಣದ ಕೈಗಳು" ಯಾವುವು? ಇವರು ಬಡವರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರಾ? ಅಥವಾ ಬೃಹತ್ ಕಟ್ಟಡ ಹಾಳಾಗಲಿ, ಮುಂದೆ ಹೊಸ ಟೆಂಡರ್ ಕರೆದು ಅದರಲ್ಲಿ ಕಮಿಷನ್ ಹೊಡೆಯುವ ಹುನ್ನಾರ ಇದರ ಹಿಂದಿದೆಯೇ? ಒಂದು ದಿನ ತೆರೆದು ಕೈತೊಳೆದುಕೊಳ್ಳುವ ಆಡಳಿತ ಯಂತ್ರದ ನಾಟಕಕ್ಕೆ ಕೊನೆಯೇನು? ಆಸ್ಪತ್ರೆಗೆ ಬೀಗ ಜಡಿದು ಬಡ ರೋಗಿಗಳ ಗೋಳನ್ನು ಕೇಳುವವರೇ ಇಲ್ಲವೇ?

ಒತ್ತಾಯ: ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಆಸ್ಪತ್ರೆಯನ್ನು ಶಾಶ್ವತವಾಗಿ ಕಾರ್ಯಾರಂಭ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

#Kushtagi #RanagalNewz #PublicInterest #HealthService #KushtagiHospital #Accountability #QuestioningSystem #PublicOutrage"

ವರದಿ: 

- ಕಿರಣ್ ದಾನಿ, ಸಂಪಾದಕರು, ರಣಗಲ್ ನ್ಯೂಜ್. © ಸರ್ವ ಹಕ್ಕು ಕಾಯ್ದಿರಿಸಲಾಗಿದೆ.

All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026

 

 

Post a Comment

Previous Post Next Post