ಕಳೆದುಕೊಂಡ ವೈಭವ

 ಕಳೆದುಕೊಂಡ ವೈಭವ

"ನಾವು ಸ್ನೇಹ, ಸಂಬಂಧಗಳನ್ನು ಆಲಂಗಿಸಬೇಕಾದ ಕೈಗಳಿಂದಲೇ ಸಂಪತ್ತನ್ನು ಆಲಂಗಿಸಿದ್ದೇವೆ;  ಹಣವನ್ನು ಮುದ್ದಾಡುವ ಧಾವಂತದಲ್ಲಿ, ಹೃದಯಗಳನ್ನು ಸ್ಪರ್ಶಿಸುವುದನ್ನೇ ಮರೆತಿದ್ದೇವೆ."

ಸಂಕಟಗಳೆಂದು ನಾವೆಲ್ಲ ಭಾವಿಸಿ

ಅವಿಭಕ್ತ ಕುಟುಂಬಗಳನ್ನೇ ತ್ಯಜಿಸಿ,

ನಮ್ಮೆದೆಯೊಳ್ ಹುದುಗಿದ ದಾಹವು

ಮತ್ತಾವುದೋ ಧಾವಂತದೋಳ್

'ಸಂತೆಯ ಹೊತ್ತಿಗೆ ಮೂರುಮಳ ನೇಯ್ದಂತೆ'.

 

 

ಎಲ್ಲದಕ್ಕಿಂತ ಮಿಗಿಲು;

ತಂದುಕೊಡುತ್ತಿದ್ದ ಆ ಪುಟ್ಟಪುಟ್ಟ

ಸಂತೋಷಗಳನ್ನು, ಮುಗ್ಧತೆಯನ್ನು

ಗೊತ್ತಿಲ್ಲದೆ ಕಳೆದುಕೊಂಡಿದ್ದೇವೆ ನಾವೆಂದೋ!

 

 

ಸಂಬಂಧಗಳ ನೆರಳು ಕಮ್ಮಿಯಾದಂತೆ,

ಆತ್ಮೀಯ ಸ್ನೇಹಗಳೂ

ಅಪರೂಪವಾಗುತ್ತ ಹೋದವು.

 

 

ಇನ್ನಾದರೂ ತಡವಿಲ್ಲ;

ಮನೆಯ ಗೋಡೆಗಳಿಗಲ್ಲ,

ಮನಗಳ ನಡುವಿನ ಅಂತರವನ್ನೇ

ಕಡಿಮೆ ಮಾಡೋಣ.

 

 

ಮತ್ತೆ ಅರಳಲಿ

ಒಲವಿನ ಓಣಿಗಳು,

ನಗುವಿನ ಅಂಗಳಗಳು,

ಹಿರಿಯರ ಆಶೀರ್ವಾದದ ಸಾನ್ನಿಧ್ಯ.

 

 

ಏಕೆಂದರೆ—

ಸಂಪತ್ತಿಗಿಂತ ಸಂಬಂಧವೇ ಶ್ರೀಮಂತ;

ಮನೆಯ ಗಾತ್ರಕ್ಕಿಂತ

ಮನದ ವಿಶಾಲತೆಯೇ

ಬದುಕಿನ ನಿಜವಾದ ವೈಭವ.

 

---

 

ಸೂಚನೆ:

"ನಾವು ಸ್ನೇಹ, ಸಂಬಂಧಗಳನ್ನು ಆಲಂಗಿಸಬೇಕಾದ ಕೈಗಳಿಂದಲೇ ಸಂಪತ್ತನ್ನು ಆಲಂಗಿಸಿದ್ದೇವೆ;

ಹಣವನ್ನು ಮುದ್ದಾಡುವ ಧಾವಂತದಲ್ಲಿ, ಹೃದಯಗಳನ್ನು ಸ್ಪರ್ಶಿಸುವುದನ್ನೇ ಮರೆತಿದ್ದೇವೆ."


ಬರಹ:

✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639


- ಕಿರಣ್ ದಾನಿ, ಸಂಪಾದಕರು, ರಣಗಲ್ ನ್ಯೂಜ್. © ಸರ್ವ ಹಕ್ಕು ಕಾಯ್ದಿರಿಸಲಾಗಿದೆ.

All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026


Post a Comment

Previous Post Next Post