"ಯೋಗ ನನಗೆ ಆರೋಗ್ಯವಷ್ಟೇ ಅಲ್ಲ, ಹೊಸ ಜೀವನವನ್ನೇ ನೀಡಿತು."

 ಯೋಗದ ಅನುಗ್ರಹ 🧘‍♂️

"ಯೋಗ ನನಗೆ ಆರೋಗ್ಯವಷ್ಟೇ ಅಲ್ಲ,  ಹೊಸ ಜೀವನವನ್ನೇ ನೀಡಿತು."

ಯೋಗಾಭ್ಯಾಸದಿಂದ ಜೀವನಕೆ

ಹೊಸತೊಂದು ಲಯ ದೊರಕಿತು;

ಚಂಚಲ ಮನದ ಅಲೆಗಳಿಗೆ

ಶಾಂತಿಯ ತೀರ ಸಿಕ್ಕಿತು ॥

 

ಆರೋಗ್ಯವು ಅರಳಿ ನಿಂತು

ಚೇತರಿಕೆಯ ಬೆಳಕು ಮೂಡಿತು;

ಸೋಮಾರಿತನದ ಮೋಡ ಸರಿದು

ಉತ್ಸಾಹದ ಸೂರ್ಯ ಉದಯಿಸಿತು ॥

 

ದಿನಚರಿಗೊಂದು ಶಿಸ್ತು ಲಭಿಸಿ

ಹೆಜ್ಜೆಗಳಿಗೊಂದು ದಿಕ್ಕು ದೊರಕಿತು;

ಅವ್ಯವಸ್ಥೆಯ ಆಗರದೊಳಗೆ

ಸಮತೋಲನದ ಪಥ ಬೆಳಗಿತು ॥

 

ಔಷಧಿಯ ಅವಲಂಬನೆ ತೊರೆದು

ನಿಧಾನವಾಗಿ ಮುಕ್ತಿ ಸಿಕ್ಕಿತು;

ಪ್ರಕೃತಿಯ ಸ್ಪರ್ಶದ ಕೊಡುಗೆಯು

ದೇಹಕೆ ಹೊಸ ಶಕ್ತಿ ತುಂಬಿತು ॥

 

ಆಹಾರದ ಕ್ರಮವ ಕಲಿಸಿ

ಭಾರದ ಹೊರೆ ಇಳಿಸಿತು;

ಹಗುರಗೊಂಡ ನರನಾಡಿಗಳಲಿ

ಲವಲವಿಕೆಯ ಚೈತನ್ಯ ತುಂಬಿತು ॥

 

ಯೋಗವು ಕೇವಲ ವ್ಯಾಯಾಮವಲ್ಲ,

ಅದೊಂದು ಜೀವನ ಪದ್ಧತಿ;

ದೇಹ-ಮನಗಳ ಸಮ್ಮಿಲನದಿ

ಆತ್ಮವಿಶ್ವಾಸ ಅರಳಿತು ॥

 

ಯೋಗದ ಅನುಗ್ರಹದಿಂದ

ಅಂತರಂಗವು ಬೆಳಗಿತು;

ಆರೋಗ್ಯ, ಶಾಂತಿ, ಸಂತೃಪ್ತಿಯ

ಅಮೃತಧಾರೆ ಹರಿಯಿತು ॥

                     **


"ಯೋಗ ನನಗೆ ಆರೋಗ್ಯವಷ್ಟೇ ಅಲ್ಲ,

ಹೊಸ ಜೀವನವನ್ನೇ ನೀಡಿತು."

ಅಮರ್ಜಾ; ಅಮರೇಗೌಡ ಪಾಟೀಲ ಜಾಲಿಹಾಳ ಕುಷ್ಟಗಿ. - ಮೊ. 9900 504 639

ಅರ್ಪಣೆ: ಆರೋಗ್ಯ ಜೀವನದ ಮಾರ್ಗದರ್ಶಕರಾದ - ಶ್ರೀ ವೀರು ಪಾಟೀಲ, 🙏

All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026

               

 


Post a Comment

Previous Post Next Post