ಬೆಳಗಿನ ಹೊನಲ ಕಿರಣದಲಿ

ವಾಕಿಂಗ್ ಯೋಧರು 🚶‍♂️                  


ಬೆಳಗಿನ ಹೊನಲ ಕಿರಣದಲಿ

ಒಟ್ಟಾಗಿ ಸೇರುವ ಗೆಳೆಯರು;

ಆರೋಗ್ಯದ ಹಾದಿಯಲಿ ನಡೆವ

ನಾವೆಲ್ಲ ವಾಕಿಂಗ್ ಯೋಧರು ॥

 

ಹೆಜ್ಜೆ ಹೆಜ್ಜೆಯ ಸಾಧನೆಯಲಿ

ಉತ್ಸಾಹದ ದೀಪ ಬೆಳಗಿಸುವರು;

ವಯಸ್ಸು ಮೀರಿದ ಸ್ನೇಹ ಬಂಧದಿ

ಸಂತಸದ ಹಾದಿ ತುಳಿಯುವರು ॥

 

ನಗು-ನುಡಿಗಳ ಸಂಗತಿಯಲಿ

ಮನದ ಭಾರವ ತಗ್ಗಿಸುವರು;

ದಿನದ ಆರಂಭ ಚೈತನ್ಯದಿಂದ

ಜೀವನ ಪಥವ ಸೊಬಗಿಸುವರು ॥

 

ದೇಹದ ಆರೋಗ್ಯ, ಮನದ ಉಲ್ಲಾಸ

ಎರಡನ್ನೂ ಜೊತೆಗೇ ಬೆಳೆಸುವರು;

ಬೆಳಗಿನ ಪಯಣದ ಗೆಳೆಯರಾಗಿ

ನಾವೆಲ್ಲ ವಾಕಿಂಗ್ ಯೋಧರು ॥ 🌿


ಬರಹ:

✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639



All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026


Post a Comment

Previous Post Next Post