ಭಾರತ ಮಾತೆಗೆ ನೂರಾರು ನಮನಗಳು.

 ಭರತಭುವಿಗೆ ಶತಶಃ ನಮಃ

ಭಾರತ ಮಾತೆಗೆ ನೂರಾರು ನಮನಗಳು

                  🚩

ಭರತಭುವಿಯಲಿ ಮಾನವನಾಗಿ

ಜನಿಸುವುದೇ ಮಹಾಭಾಗ್ಯವು;

ಪಶುವಾಗಿಯಾದರೂ ಹುಟ್ಟಲಿ,

ಮರಗಿಡವಾಗಿಯಾದರೂ ಬೆಳೆಯಲಿ

 

ಕನಿಷ್ಠತಮ ಬಂಡೆಯಾದರೂ ಸರಿಯೇ

ಈ ಪುಣ್ಯಭೂಮಿಯಲಿ ನೆಲಸಿರಲಿ;

ಕಾರಣವಿದೆ—ಶಿಲೆಯೂ ಇಲ್ಲಿ

ಭಗವಂತನಾಗುವ ಅವಕಾಶವಿದೆ

 

ನದಿಗಳು ತೀರ್ಥದ ಹೊನಲಂತೆ,

ಗಾಳಿಯು ಮಂತ್ರದ ನಿನಾದದಂತೆ

ಮಣ್ಣಿನ ಕಣಕಣದಲ್ಲಿಯೂ ನೆಲೆದಿದೆ

ಋಷಿಮುನಿಗಳ ತಪದ ಪ್ರಸಾದ

 

ತ್ಯಾಗ-ಯೋಗ, ಧರ್ಮ-ಕರುಣೆ—

ಸಾಧುಸಂತರ ಪುಣ್ಯಭೂಮಿಯಿದು;

ಜನ್ಮವೆಂಬುದು ಇಲ್ಲಿ ವರವಾದರೆ,

ಮರುಜನ್ಮಕ್ಕೂ ಇಲ್ಲಿಯೇ ಆಸರೆಯಿದೆ

 

ದೇವಾನುದೇವತೆಗಳ ದೇಶವಿದು,

ದೈವತ್ವದ ದಿವ್ಯ ಸಂದೇಶ ಹೊತ್ತ,

ಜಡದಲ್ಲಿಯೂ ಚೈತನ್ಯ ಕಂಡ

ಭರತಭೂಮಿಗೆ ಶತಶಃ ನಮಃ

                *

ಬರಹ:

✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639


All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026

  

Post a Comment

Previous Post Next Post